ಬಹರೈನಿನ ಬಗ್ಗೆ ನಿಮಗೆ ತಿಳಿದಿರಲೇಬೇಕಾದ 15 ವೈಶಿಷ್ಟ್ಯತೆಗಳು

 ಬಹರೈನ್‌ ಎಂಬ ರಾಷ್ಟ್ರಕ್ಕಿಂತ ದೊಡ್ಡ ದೊಡ್ಡ ಸಾಕಷ್ಟು ನಗರಗಳೇ ಭಾರತದಲ್ಲಿವೆ. ಹಲವಾರು ಭಾರತೀಯ ಮನೆಗಳಲ್ಲಿ ಮೂರು ಹೊತ್ತಿನ ತುತ್ತು ಬೇಯುವಲ್ಲಿ ಬಹರೈನಿನ ಸಣ್ಣ ಪಾತ್ರವೂ ಇದೆ. ಹೆಚ್ಚಿನ ಸಂಖ್ಯೆಯ ಭಾರತೀಯರು ಅಲ್ಲಿ ಕೆಲಸದಲ್ಲಿದ್ದಾರೆ. ಜತೆಗೆ ಪ್ರವಾಸಿಗಳು ಕನಸು ಕಾಣುವ ಮೆಚ್ಚಿನ ತಾಣವೂ ಹೌದು ಬಹರೈನ್.‌ ಈ ಪುಟ್ಟ್‌ ದೇಶದ ದೊಡ್ಡ ವಿಶೇಷತೆಗಳ ಬಗ್ಗೆ ತಿಳಿಯೋಣ, ಬನ್ನಿ.


ಪೇರ್ಶಿಯನ್ ಗಲ್ಫಿನಲ್ಲಿರುವ ಒಂದು ವಿಶಿಷ್ಟ ದ್ವೀಪ ರಾಷ್ಟ್ರವಾದ ಬಹರೈನ್, 33 ದ್ವೀಪಗಳ ಸಮೂಹವಾಗಿದೆ. ಅದರಲ್ಲಿ ಅತ್ಯಂತ ದೊಡ್ಡದು ಬಹರೈನ್ ದ್ವೀಪ ಆಗಿದೆ.


ಜಗತ್ತಿನ ಅತ್ಯಂತ ಸಣ್ಣ ದೇಶಗಳಲ್ಲಿ ಒಂದಾಗಿದೆ ಬಹರೈನ್. ಕುತೂಹಲವೆಂದರೆ ಇದು ಅತ್ಯಂತ ಸಂಪತ್ ಭರಿತವಾದ ದೇಶಗಳೆಲ್ಲೊಂದು. ಇಲ್ಲಿನ ಪಾರದರ್ಶಕವಾದ ಬ್ಯಾಂಕಿಂಗ್, ವಾಣಿಜ್ಯ ಸೇವೆಗಳೇ ಇದರ ಹೇತು.


ಪೌರಾಣಿಕ ಕಾಲದಿಂದಲೇ ಸಂಪನ್ನವಾದ ಇತಿಹಾಸವಿರುವ ದೇಶವಾಗಿದೆ ಇದು. ಹಿಂದಿನ ಕಾಲದಲ್ಲಿ ಪ್ರಧಾನ ವ್ಯಾಪಾರ ಕೇಂದ್ರವಾಗಿದ್ದ ದಿಲ್ಮುನ್ ನಾಗರಿಕತೆಯ ತವರೂರು ಈ ಬಹರೈನ್.


ರಾಜಧಾನಿ ಮನಾಮದಲ್ಲಿರುವ ಬಹರೈನ್ ವರ್ಲ್ಡ್ ಟ್ರೇಡ್ ಸೆಂಟರಿನಲ್ಲಿ ಗಾಳಿ ಟರ್ಬೈನುಗಳನ್ನು ಅಳವಡಿಸಿದ ಜಗತ್ತಿನ ಮೊಟ್ಟಮೊದಲ ಗಗನಚುಂಬಿ ಎಂಬ ಖ್ಯಾತಿ ಪಡೆದಿದೆ.


ಮುತ್ತು ಡೈವಿಂಗಿಗೆ (Pearl Diving) ಹೆಸರುವಾಸಿಯಾಗಿರುವ ಬಹರೈನ್, ಒಂದು ಕಾಲದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಹವಳಗಳ ಉತ್ಪಾದಕರಲ್ಲಿ ಒಂದಾಗಿತ್ತು. ಬಹರೈನ್ ಪೇರ್ಳಿಂಗ್ ಟ್ರೈಲ್ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲೊಂದು.


ಜಗತ್ಪ್ರಸಿದ್ಧವಾದ ಮೋಟಾರ್ ಸ್ಪೋರ್ಟ್ಸಿಗೆ ವೇದಿಕೆಯಾಗಿರುವ ಬಹರೈನ್ ಇಂಟರ್ನ್ಯಾಷನಲ್ ಸರ್ಕ್ಯೂಟ್, ಫಾರ್ಮುಲಾ 1 ಕ್ಯಾಲೆಂಡರಿನ ಒಂದು ಪ್ರಧಾನ ಕಾರ್ಯಕ್ರಮವಾದ ವಾರ್ಷಿಕ ಬಹರೈನ್ ಗ್ರಾಂಡ್ ಪ್ರಿಕ್ಸಿನಿಗೆ ಬಹರೈನ್ ಆತಿಥ್ಯ ನೀಡುತ್ತದೆ.


ಬಹಾರೈನಿನಲ್ಲಿ ಗಣನೀಯವಾದ ಅನಿವಾಸಿ ಜನಸಂಖ್ಯೆ ಇದೆ. ಇದು ದೇಶದ ಒಟ್ಟು ಜನಸಂಖ್ಯೆಯ 50 ಶೇಕಡಾ ಕ್ಕಿಂತಲೂ ಅಧಿಕವಾಗಿದೆ. ಪ್ರತ್ಯೇಕವಾಗಿ ಭಾರತ, ಫಿಲಿಪಿನ್ಸ್, ಪಾಕಿಸ್ತಾನ ಮತ್ತಿತರ ಅರಬಿಕ್ ದೇಶಗಳಿಂದಲೂ ಜನರು ಇಲ್ಲಿ ವಾಸಿಸುತ್ತಿದ್ದಾರೆ. 


ಗಲ್ಫ್ ಏರಿಯಾದ ಅತಿ ದೊಡ್ಡದೂ ಪುರಾತನವೂ ಮ್ಯೂಸಿಯಂ ಗಳಲ್ಲಿ ಒಂದಾಗಿದೆ ಬಹರೈನ್ ನ್ಯಾಷನಲ್ ಯೂಸಿಯಂ, ದಿಲ್ಮೂನ್ ನಾಗರಿಕತೆಯ ಪ್ರಧಾನ ಪುರಾತತ್ವ ಸಂಶೋಧನೆಗಳು ಮತ್ತು ಬಹರೈನಿನ ಇತಿಹಾಸದ ಪ್ರಾಚೀನ ವಸ್ತುಗಳೂ ಇಲ್ಲಿವೆ.


ಸಮೃದ್ಧವಾದ ಕಾಫಿ ಸಂಸ್ಕೃತಿಗೆ ಹೆಸರುವಾಸಿಯಾದ ಬಹರೇನ್, ಏಲಕ್ಕಿ, ಕೇಸರಿ ಹಾಗೂ ಲವಂಗಗಳಂತಹ ಮಸಾಲೆಗಳಿಂದ ತಯಾರು ಮಾಡಿದ ಸಾಂಪ್ರದಾಯಿಕ ಬಹರೈನ್ ಕಾಫಿ 'ಗಹ್ವಾ' ಬಾರಿ ಪ್ರಸಿದ್ಧವಾಗಿದೆ. ಅತಿಥಿಗಳ ಪ್ರಧಾನ ಪಾನೀಯವೂ ಇದೇ ಆಗಿದೆ.


1930 ಗಳಲ್ಲಿ ಗಲ್ಫ್ ಪ್ರದೇಶದಲ್ಲಿ ಪೆಟ್ರೋಲಿಯಂ ಲಭಿಸಿದ ಮೊಟ್ಟ ಮೊದಲ ದೇಶವಾಗಿದೆ ಬಹರೈನ್. ಇದು ಒಂದು ಸಣ್ಣ ವಾಣಿಜ್ಯ ಕೇಂದ್ರದಿಂದ ಅತ್ಯಾಧುನಿಕ, ಅತಿ ಸಂಪನ್ನ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

 

ದಕ್ಷಿಣ ಬಹರೈನ್ ಮರುಭೂಮಿಯಲ್ಲಿರುವ ಅಪರೂಪದ ಜೀವ ವೃಕ್ಷ, 400 ವರ್ಷಗಳಿಂದಲೂ ಯಾವುದೇ ಜಲಮೂಲಗಳಿಲ್ಲದೆ ನಿಬಿಡವಾಗಿ ಬೆಳೆಯುವ ಒಂದು ಪುರಾತನ ಮರವಾಗಿದೆ.

 

ಕಾಡು ಪ್ರಾಣಿಗಳು, ನಯ ಮರೆತು ಈಜಾಡಬಹುದಾದ ಬಿಸಿನೀರಿನ ಬುಗ್ಗೆಗಳು ಹೇರಳವಾಗಿರುವ ಸಸ್ಯ ಪ್ರಾಣಿಗಳ ಆವಾಸಸ್ಥಾನವಾಗಿರುವ ಅಲ್ ಅರೀನ್ ವನ್ಯಜೀವಿ ಉದ್ಯಾನವನ ಸಂದರ್ಶಕರ ಆದ್ಯತೆಗಳೆಲ್ಲೊಂದು.

 

ತಂತ್ರಜ್ಞಾನ, ಟೂರಿಸಂ, ಸುಸ್ಥಿರ ಇಂಧನ ಮುಂತಾದವುಗಳಿಗೆ ಪ್ರಾಧಾನ್ಯ ಕಲ್ಪಿಸುವ ದೇಶವು, ಆರ್ಥಿಕತೆಯ ವೈವಿಧ್ಯೀಕರಣಕ್ಕೆ ನಾಂದಿ ಹಾಡಿದೆ.

 

ಸೌದಿ ಅರೇಬಿಯಾ ಮತ್ತು ಬಹರೈನನ್ನು ಸಂಪರ್ಕ ಕೊಂಡಿಯಾಗಿರುವ ಕಿಂಗ್ ಫಹದ್ ಕ್ರಾಸ್ ವೇ, ಕಡಲಿನಲ್ಲಿಯೇ 25 ಕಿ.ಮೀ (16 ಮೈಲು) ಉದ್ದದ ಜಗತ್ತಿನ ಅತಿ ದೊಡ್ಡ ಸೇತುವೆಗಳಲ್ಲಿ ಒಂದಾಗಿದೆ.

Post a Comment

Previous Post Next Post