ನೀವು ದುಬೈ ನಿವಾಸಿ ಅಥವಾ ಸಂದರ್ಶಕರಾಗಿದ್ದರೆ ಈ ವಿಷಯಗಳು ಖಂಡಿತವಾಗಿಯೂ ನೀವು ತಿಳಿದಿರಬೇಕು!!

 ದುಬೈ ಏರ್ಪೋರ್ಟ್: ನೀವು ಯು ಏ ಇಗೆ ಬರುವವರಾಗಿದ್ದರೆ ಅಥವಾ ಯು ಎ ಇ ಯಿಂದ ಊರಿಗೆ ಹೋಗುವವರಾಗಿದ್ದರೆ ಅಧಿಕ ಪ್ರಮಾಣದ ಹಣ ಅಥವಾ ಅಧಿಕ ಬೆಲೆ ಇರುವ ವಸ್ತು ವಗೈರೆಗಳನ್ನು ಕೊಂಡು ಹೋಗಲು ಹಲವಾರು ನಿಬಂಧನೆಗಳಿವೆ. 60,000 ದಿರ್ಹಂಸ್ ಅಥವಾ ಅದಕ್ಕಿಂತಲೂ ಸಮಾನಾದ ವಿದೇಶಿ ಹಣವನ್ನು ಕೊಂಡು ಹೋಗುವ ಯಾತ್ರಿಕರು ಕಸ್ಟಮ್ಸ್ ಅಧಿಕಾರಿಗಳನ್ನು ತಿಳಿಸಬೇಕು.


ದುಬೈ ವಿಮಾನ ನಿಲ್ದಾಣದಲ್ಲಿ ಪಾಸ್ಪೋರ್ಟ್ ತಪಾಸಣೆಯ ನಂತರ ಕಸ್ಟಮ್ಸ್ ಪ್ರಕ್ರಿಯೆ ಶುರುವಾಗುತ್ತದೆ. ಇದು ನೀವು ಕಸ್ಟಮ್ಸ್ ಗೇಟ್ಗಳನ್ನು ದಾಟಿ ಹೋಗುವವರೆಗೆ ಮುಂದುವರೆಯುತ್ತದೆ. ವಸ್ತುಗಳನ್ನು ಪರಿಶೋಧಿಸಲು, ಸುಂಕ ವಿಧಿಸಲು ಮತ್ತು ನೊಂದಾಯಿಸದ ವಸ್ತುಗಳನ್ನು ಜಪ್ತಿ ಮಾಡಲು ಕಸ್ಟಮ್ಸ್ ಉದ್ಯೋಗಿಗಳಿಗೆ ಅಧಿಕಾರವಿದೆ.


ಬಾಯಿ ಮಾತು, ಬರವಣಿಗೆ, ಎಲೆಕ್ಟ್ರಾನಿಕ್ ರೀತಿಯಲ್ಲಿ ಗ್ರೀನ್/ರೆಡ್ ಚಾನಲ್ಗಳನ್ನು ಉಪಯೋಗಿಸುವುದರ ಮೂಲಕ ಔದ್ಯೋಗಿಕವಾಗಿ ಘೋಷಿಸುವುದು ನಿಮ್ಮ ಕಸ್ಟಮ್ಸ್ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ದುಬೈ ವಿಮಾನ ನಿಲ್ದಾಣದ ಮಾಹಿತಿಯ ಪ್ರಕಾರ ಕಸ್ಟಮ್ಸ್ ಸುಂಕದಿಂದ ಹೊರತುಪಡಿಸಲಾದ ಕೆಲವು ಸಾಮಾನುಗಳ ವಿವರ ಇಂತಿವೆ.

 

ಕಸ್ಟಮ್ಸ್ ಸುಂಕದಿಂದ ಮುಕ್ತಗೊಳಿಸಲಾದ ವಸ್ತುಗಳು


1. 3000 ದಿರ್ಹಮ್ಸ್ ವರೆಗೆ ಬೆಲೆ ಇರುವ ಉಡುಗೊರೆಗಳು


2. ತಂಬಾಕು ಉತ್ಪನ್ನಗಳು

ಇನ್ನೂರು ಸಿಗರೇಟ್ ಗಳು ಅಥವಾ 50 ಸಿಗರೇಟ್ ಗಳು ಅಥವಾ 500 ಗ್ರಾಂ ತಂಬಾಕು (ಟೈಪುಗಳು, ಹುಕ್ಕಾ ಮೊಲಾಸಸ್,‌ ಇನ್ನಿತರ ಮತ್ತೆಲ್ಲಾ ಉಪಯೋಗಗಳಿಗೆ) ಅಧಿಕ ಪ್ರಮಾಣದಲ್ಲಿದ್ದರೆ ಕಸ್ಟಮ್ಸ್ ಸುಂಕ ಬಾಧಕವಾಗಿರುತ್ತದೆ.


3. ಆಲ್ಕೋಹಾಲ್ ಪಾನೀಯಗಳು

ನಾಲ್ಕು ಲೀಟರ್ ವರೆಗೆ, ಅಥವಾ ಎರಡು ಕಾರ್ಟನ್ ಬಿಯರ್ (24 ಕ್ಯಾನುಗಳಿರುವ ಪ್ರತಿ ಕಾರ್ಟನ್ ಗಳಲ್ಲಿ 355 ಮಿಲ್ಲಿಯ ಬಾಟಲ್)ಇದಕ್ಕಿಂತಲೂ ಅಧಿಕವಿದ್ದರೆ ಜಪ್ತಿ ಮಾಡಲಾಗುವುದು.


4. ಎಲೆಕ್ಟ್ರಾನಿಕ್ ಸಿಗರೇಟ್ ಉಪಕರಣಗಳು.


ಇ-ಸಿಗರೇಟುಗಳು, ಇ-ಹುಕ್ಕಾಗಳು, ಬಿಸಿ ಮಾಡಿದ ತಂಬಾಕು ಉಪಕರಣಗಳು, ನಿಕೋಟಿನ್ ದ್ರವ್ಯಗಳು ಅಥವಾ ಕ್ಯಾಟ್ರಿಡುಗಳು ಮುಂತಾದ ವೈಯಕ್ತಿಕ ಉಪಯೋಗಕ್ಕೆ ಮಾತ್ರ ವಾಗಿದ್ದಲ್ಲಿ ಅನುವದನೀಯವಾಗಿದೆ. ಹಾಗಿದ್ದರೂ ಅಂತಿಮ ತೀರ್ಮಾನ ಕಸ್ಟಮ್ಸ್ ಅಧಿಕಾರಿಗಳದ್ದಾಗಿದೆ.


5. ಹಣ ಅಥವಾ ಬೆಳೆಬಾಳುವ ವಸ್ತುಗಳು

ನಿಮ್ಮ ಕೈಯಲ್ಲಿ 60,000 ದಿರ್ಹಮ್ಸಿಗಿಂತ ಅಧಿಕ ಹಣ (ಅಥವಾ ಅದಕ್ಕೆ ಸಮಾನವಾದ ವಿದೇಶಿ ಹಣ) ಇದ್ದಲ್ಲಿ ಅದನ್ನು ಅಧಿಕಾರಿಗಳಿಗೆ ಅಧಿಕೃತವಾಗಿ ಘೋಷಿಸಬೇಕು. ಹಣ, ಚೆಕ್ಕುಗಳು, ಪ್ರೊಮಿಸರಿ ನೋಟ್ಸ್, ಪೇಯ್ಮೆಂಟ್ ಆರ್ಡರುಗಳು, ಬೆಲೆಬಾಳುವ ಲೋಹಗಳು ಮತ್ತು ಖನಿಜಗಳು ಮುಂತಾದವುಗಳಿಗೂ ತಥೈವ.

 

ಹದಿನೆಂಟು ವರ್ಷ ವಯಸ್ಸಿಗಿಂತ ಕಡಿಮೆಯಿರುವ ಯಾತ್ರಿಕನಾಗಿದ್ದರೆ ಅವನ ಮಾತಾಪಿತರು, ಪೋಷಕರು ಅಥವಾ ಅವನೊಂದಿಗಿರುವ ಹಿರಿಯರು ಅವನ ಧನ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕು. 'iDeclare' ಮೊಬೈಲ್ ಅಪ್ಲಿಕೇಶನಿನ ಮೂಲಕ ನೀವು ವಿವರಗಳನ್ನು ನೋಂದಾಯಿಸಬಹುದು.

 

ಡ್ಯೂಟಿ ಫ್ರೀ ಸಿಗಬಹುದಾದ ವ್ಯವಸ್ಥೆಗಳು


1. ನಿಮ್ಮ ಲಗೇಜು ಮತ್ತು ಉಡುಗೊರೆಗಳು ವೈಯಕ್ತಿಕ ಉಪಯೋಗಕ್ಕಾಗಿರಬೇಕು.


2. ನೀವು ಒಂದೇ ತರದ ಉಡುಗೊರೆಗಳು ಹಲವಾರು ಬಾರಿ ಕೊಂಡು ಹೋಗುವ ರೆಗುಲರ್ ಸಂದರ್ಶಕನಾಗಿದ್ದರೆ ಮತ್ತು ವಸ್ತುಗಳನ್ನು ವ್ಯಾಪಾರಕ್ಕೆ ಬಳಸುವವನಾಗಿರಬಾರದು.


3. ನೀವು ವಿಮಾನದ ಕ್ರೂ ಮೆಂಬರ್ ಅಥವಾ ವಿಮಾನ ನಿಲ್ದಾಣದ ಗ್ರೌಂಡ್ ಸ್ಟಾಫ್ ಆಗಿರಬಾರದು.


4. 18 ವಯಸ್ಸಿಗಿಂತ ಕಡಿಮೆ ಇರುವ ಯಾತ್ರಿಕರಿಗೆ ತಂಬಾಕು ಮತ್ತು ಆಲ್ಕೋಹಾಲ್ ಬ್ಯೂಟಿ ಫ್ರೀ ಆಗಿ ಕೊಂಡು ಹೋಗಲು ನಿರ್ಬಂಧಿಸಲಾಗಿದೆ.


5. ವಾಣಿಜ್ಯ ಸ್ಯಾಂಪಲುಗಳು- ಜಿಸಿಸಿ (ಗಲ್ಫ್ ಸಹಕಾರಿ ಕೌನ್ಸಿಲ್) ದೇಶಗಳಿಗೆ ಆಮದು ಮಾಡಲಾಗುವ 5000 ದಿರ್ಹಂಸ್ ಅಥವಾ ಅದಕ್ಕಿಂತ ಕಡಿಮೆ ಬೆಲೆ ಇರುವ ಸ್ಯಾಂಪಲುಗಳಿಗೆ ಕಸ್ಟಮ್ಸ್ ಸುಂಕದಿಂದ ಮುಕ್ತಗೊಳಿಸಲಾಗಿದೆ.

Post a Comment

Previous Post Next Post