ಯು.ಏ.ಇ ಯಲ್ಲಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವವರಾಗಿದ್ದಲ್ಲಿ ಗಮನಿಸಿ. ನೀವು ಈ ವಂಚನೆಗೆ ಬಲಿಯಾಗಬಹುದು!!!!

 ಯು ಎ ಇ: ಯು ಏ ಇ ಯಲ್ಲಿ ಕ್ಯೂ ಆರ್ ಕೋಡ್ ಮೂಲಕ ಹಣಕಾಸು ವಹಿವಾಟು ಈಗ ಸರ್ವೇಸಾಮಾನ್ಯವಾಗಿದೆ. ಈಗ ಅವರಿಗಾಗಿ ಒಂದು ಎಚ್ಚರಿಕೆಯ ಸಂದೇಶ ರವಾನೆಯಾಗಿದೆ. QR Code ಸ್ಕ್ಯಾನ್ ಮೂಲಕ ವ್ಯಾಜ್ಯ ವೆಬ್ಸೈಟ್ಗಳಿಗೆ ಜನರನ್ನು ಆಕರ್ಷಿಸಿ ಅವರ ದತ್ತಾಂಶಗಳನ್ನು ಕದಿಯುವ ಹೊಸ ಮೋಸದ ಜಾಲ ದೇಶದೆಲ್ಲೆಡೆ ವ್ಯಾಪಕವಾಗಿದೆ. ಆದುದರಿಂದ ಯುಎಇ ಯ ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ಯಾವುದೇ ಸಂಶಯಸ್ಪದ QR Code ಗಳನ್ನು ಸ್ಕ್ಯಾನ್ ಮಾಡದಿರಲು ಪ್ರತ್ಯೇಕ ಜಾಗ್ರತೆ ವಹಿಸಬೇಕು. ಇನ್ನು ನೀವು ಸ್ಕ್ಯಾನ್ ಮಾಡಿದಾಗ ಯಾವುದಾದರೂ ಸಂಶಯಾಸ್ಪದ ವೆಬ್ಸೈಟ್ಗಳಿಗೆ ನೀವು ತಲುಪಿದರೆ ಅಥವಾ ನಿಮ್ಮ ವೈಯಕ್ತಿಕ ದತ್ತಾಂಶಗಳನ್ನು ಕೇಳಿದರೆ ಯಾವುದೇ ಕಾರಣಕ್ಕೂ ನೀಡಬಾರದು ಎಂದು ಅಧಿಕೃತರು ಎಚ್ಚರಿಸಿದ್ದಾರೆ.

ಸೈಬರ್ ಕಳ್ಳರು ನಕಲಿ QR Code ಸ್ಟಿಕ್ಕರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಇತರರನ್ನು ಫಿಶಿಂಗ್ ವೆಬ್ಸೈಟ್ಗಳಿಗೆ ಲಾಗಿನ್ ಆಗುವಂತೆ ಮಾಡುತ್ತಾರೆ. ಹೀಗೆ ಲಾಗಿನ್ ಆಗುವವರ ವೈಯಕ್ತಿಕ ದತ್ತಾಂಶಗಳು ಮತ್ತು ಬ್ಯಾಂಕಿಂಗ್ ವಿವರಗಳನ್ನು ಕದಿಯಲು ಮತ್ತು ನಿಮ್ಮ ಡಿವೈಸ್ ಗಳಲ್ಲಿ ಮಾಲ್ವೇರ್ ಇನ್ಸ್ಟಾಲ್ ಮಾಡಲೂ ಸಾಧ್ಯತೆಗಳಿವೆ.

 

ಯು ಆರ್ ಕಾಡುಗಳು ನಕಲಿ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು?

ನಿಮಗೆ ನಂಬಿಕೆ ಇರುವ ಸ್ಥಳಗಳಲ್ಲಿ ಇರುವ ಕ್ಯೂಆರ್ ಕೋಡ್ ಗಳನ್ನು ಮಾತ್ರ ಉಪಯೋಗಿಸಬೇಕು. ಸ್ಕ್ಯಾನ್ ಮಾಡಿ ಲಿಂಕ್ ತೆರೆಯುವುದರ ಮುಂಚಿತವಾಗಿ URL ಅನ್ನು ಖಚಿತಪಡಿಸಬೇಕು. ಪ್ರತ್ಯೇಕವಾಗಿ " https" ಎಂದು ಪ್ರಾರಂಭವಾಗದ ಲಿಂಕ್ ಆಗಿದೆ ಎಂದು ಖಾತ್ರಿಪಡಿಸಬೇಕು. ಅದೇ ರೀತಿ ನಿಮ್ಮ ಫೋನಿನಲ್ಲಿ ಸುರಕ್ಷಾ ಸಂವಿಧಾನವನ್ನೂ ಸೆಟ್ಟಿಂಗ್ ಮಾಡಬೇಕು. ಅಪರಿಚಿತ ಸ್ಥಳಗಳಲ್ಲಿರುವ ಯಾವುದೇ ಕೋಡುಗಳನ್ನು ಸ್ಕ್ಯಾನ್ ಮಾಡಬಾರದು.

 

ಈ ರೀತಿಯ ಮೋಸಕ್ಕೆ ಒಳಗಾದರೆ ಏನು ಮಾಡಬೇಕು?

ಮೋಸಕ್ಕೆ ಒಳಗಾಗಿದ್ದೀರಿ ಎಂದು ಮನವರಿಕೆ ಆದ ಕೂಡಲೇ ಬ್ಯಾಂಕ್ ಅನ್ನು ಸಂಪರ್ಕಿಸಿ ನಿಮ್ಮ ಕಾರ್ಡುಗಳನ್ನು ನಿಷ್ಕ್ರಿಯಗೊಳಿಸಬೇಕು. ವಿಶ್ವಾಸಾರ್ಹ ಆಂಟಿವೈರಸ್ ಸಾಫ್ಟ್ವೇರ್ ಉಪಯೋಗಿಸಿ ನಿಮ್ಮ ಡಿವೈಸ್ ಅನ್ನು ಸ್ಕ್ಯಾನ್ ಮಾಡಬೇಕು. ನಿಮ್ಮ ಬ್ಯಾಂಕ್ ಸಂಬಂಧಿತ ಎಲ್ಲಾ ಖಾತೆಗಳ ಪಾಸ್ವರ್ಡ್ ಗಳನ್ನು ಬದಲಾಯಿಸಬೇಕು. ಬ್ಯಾಂಕ್ ಅಧಿಕಾರಿಗಳಿಗೆ ಅಧಿಕೃತವಾಗಿ ದೂರು ದಾಖಲಿಸಬೇಕು. ಸೈಬರ್ ಸುರಕ್ಷಾ ಕೌನ್ಸಿಲ್ ಸಾರ್ವಜನಿಕರ ಜಾಗೃತಿಗಾಗಿ ಹಲವಾರು ಪದ್ಧತಿಗಳನ್ನು ಜಾರಿಗೊಳಿಸಿದೆ. ಡಿಜಿಟಲ್ ಸೇವೆ ಒದಗಿಸುವವರ ಜೊತೆ ಸಹಯೋಗದಲ್ಲಿ ಕ್ಯೂಆರ್ ಕೋಡ್ ಉಪಯೋಗದ ಸುರಕ್ಷತೆ, ಭದ್ರತಾ ಮಾನದಂಡಗಳನ್ನು ಜಾರಿಗೊಳಿಸಲು, ಸೈಬರ್ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರನ್ನು ಜಾಗೃತ ರನ್ನಾಗಿ ಮಾಡಲು ಯುಎಇ ಸೈಬರ್ ಸುರಕ್ಷತಾ ಕೌನ್ಸಿಲ್ ಶತಾಯಗತಾಯ ಪ್ರಯತ್ನಿಸುತ್ತಿದೆ.

 

ಕ್ಯೂಆರ್ ಕೋಡ್ ವಂಚನೆಗೆ ಒಳಗಾಗಬಹುದಾದ ಸಂಭಾವ್ಯ ಸ್ಥಳಗಳು

 ಸಾರ್ವಜನಿಕ ಯಾತ್ರಾ ಸ್ಥಳಗಳು: ಇತ್ತೀಚೆಗೆ ದುಬೈಯ ಒಂದು ಬಸ್ ಸ್ಟೇಷನ್ ನಲ್ಲಿ ಬಸ್ ರೂಟ್ ಮಾಹಿತಿಗಾಗಿ ಒಂದು ಕ್ಯೂಆರ್ ಕೋಡ್ ಸ್ಕ್ಯಾನರ್ ಅಂಟಿಸಲಾಗಿತ್ತು. ಅದನ್ನು ಸ್ಕ್ಯಾನ್ ಮಾಡಿದ ವ್ಯಕ್ತಿಯೊಬ್ಬರಿಗೆ ಬ್ಯಾಂಕ್ ಮಾಹಿತಿಯನ್ನು ಕೇಳುವ ನಕಲಿ ವೆಬ್ಸೈಟಿಗೆ ಲಾಗಿನ್ ಆಗಿದ್ದರು‌.


ಸಾರ್ವಜನಿಕ ಪಾರ್ಕುಗಳು: ಶಾರ್ಜಾದಲ್ಲಿ ವ್ಯಕ್ತಿಯೊಬ್ಬರು QR ಸ್ಕ್ಯಾನ್ ಮಾಡಿದಾಗ ಬ್ಯಾಂಕ್ ಮಾಹಿತಿ ಸೋರಿಕೆಯಾಗಿ ಹಣ ಕಳೆದುಕೊಂಡಿದ್ದಾರೆ.

 

ಆಫರ್ ಕೂಪನುಗಳು

ಆಫರ್ ಆಸೆಗಾಗಿ ಸ್ಕ್ಯಾನ್ ಮಾಡಿದ ವ್ಯಕ್ತಿಯೊಬ್ಬರಿಗೆ ತನ್ನ ಖಾತೆಯಲ್ಲಿರುವ ಸಾವಿರಾರು ದಿರ್ಹಂಸ್ ಹಣ ಕಳೆದುಕೊಂಡ ಪ್ರಕರಣ ರಾಸಲ್ಖೈಮಾದಲ್ಲಿ ವರದಿಯಾಗಿದೆ.

Post a Comment

Previous Post Next Post