ಜಗತ್ತಿನ ಎಲ್ಲಾ ದೇಶಗಳನ್ನು ಸುತ್ತಾಡಬೇಕು. ಅಲ್ಲಿನ ವಿಶೇಷ ವಸ್ತು ವಗೈರೆಗಳನ್ನು ಖರೀದಿಸಿ ತಮ್ಮ ಅಲ್ಮೆರಾಗಳನ್ನು ತುಂಬಿಸಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ದುಬೈ ಗ್ಲೋಬಲ್ ವಿಲೇಜ್ ಅಂತಹ ಉದ್ದೇಶದವರಿಗಾಗಿ ಹೇಳಿ ಮಾಡಿಸಿದ ಜಾಗ.
ದುಬೈನಲ್ಲಿ ಸ್ಥಾಪಿತವಾದ ಜಾಗತಿಕ ಗ್ರಾಮ ಎಂಬರ್ಥ ಬರುವ (Global Village) ಒಂದು ಪ್ರಖ್ಯಾತ ಪ್ರವಾಸಿ ತಾಣ. ಸ್ಥಳೀಯ ಮತ್ತು ಜಾಗತಿಕ ಸಂಸ್ಕೃತಿಗಳ ಅಭೂತಪೂರ್ವ ಸಮಾಗಮ ಇಲ್ಲಿ ಕಾಣಬಹುದಾಗಿದ್ದು ಆಸಕ್ತರು ಇಲ್ಲಿ ತಲುಪುತ್ತಾರೆ. ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ ಈ ಜಾಗ ಸಂದರ್ಶಕರ ಮನಸದಲ್ಲಿ ಅನುಭವದ ಅಮೋಘ ರಸದೌತಣವನ್ನು ಕಟ್ಟಿ ಕೊಡುವ ಮೂಲಕ ವಿಶಿಷ್ಟ ಛಾಪು ಮೂಡಿಸಿದೆ. ಗ್ಲೋಬಲ್ ವಿಲೇಜ್ ವಿವಿಧ ದೇಶಗಳ ಜನರ ಸಂಸ್ಕೃತಿ ಹಾಗೂ ಜಗತ್ತಿನ ವಿವಿಧ ಕೋನಗಳಲ್ಲಿ ಚಾಲ್ತಿಯಲ್ಲಿರುವ ಜೀವನಕ್ರಮ ಹಾಗೂ ಮಾರುಕಟ್ಟ ಗುಣಗಳನ್ನು ಪ್ರತಿನಿಧಿಸುತ್ತದೆ.
ಗ್ಲೋಬಲ್ ವಿಲೇಜ್
ಸಾವಿರದ ಒಂಬೈನೂರ ತೊಂಬತ್ತ ಒಂಬತ್ತರಲ್ಲಿ ಸ್ಥಾಪನೆಗೊಂಡಿದೆ. ಈ ಬೃಹತ್ ಸಂಸ್ಕೃತಿ ಪ್ರದರ್ಶನ
ಮಳಿಗೆಯು ನಿಜವಾಗಿ 78 ದೇಶಗಳ ಸಂಸ್ಕೃತಿ, ಭೋಜನ, ಕಲೆ, ಹಸ್ತಶಿಲ್ಪಗಳನ್ನು ಪ್ರದರ್ಶಿಸುವ ಒಂದು ವಿಶಾಲವಾದ ಮೇಳವಾಗಿ
ರೂಪುಗೊಂಡಿದೆ. ಪ್ರತಿ ವರ್ಷ ದುಬೈಯ ಮನೋಹರ ಕಾಲಮಾನವಾದ ವಿಂಟರ್‌ನಲ್ಲಿ Global Village Season ಆರಂಭಗೊಳ್ಳುತ್ತದೆ. ಪ್ರತಿಯೊಂದು ದೇಶವು ತನ್ನ ದೇಶದ ವೈಶಿಷ್ಟ್ಯಗಳನ್ನು
ಪ್ರದರ್ಶಿಸುವ ಪವಿಲಿಯನ್‌ಗಳನ್ನು ಹೊಂದಿದ್ದು ತಮ್ಮ ರಾಷ್ಟ್ರ ವಿಶಿಷ್ಟ ಉತ್ಮನ್ನಗಳನ್ನು
ಮಾರಾಟಕ್ಕೆ ಇಟ್ಟಿರುತ್ತದೆ. ಹೀಗೆ ಭಾರತ, ಸೌದಿ ಅರೇಬಿಯಾ, ಇಟಲಿ, ಚೀನಾ ಮತ್ತು ಇತರ ಅನೇಕ
ದೇಶಗಳ ವೈವಿಧ್ಯಮಯ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಇಲ್ಲಿನದ್ದು.
ಇದಷ್ಟೇ ಅಲ್ಲದೆ, ಗ್ಲೋಬಲ್ ವಿಲೇಜ್ ತನ್ನ ಮನರಂಜನಾ ನೃತ್ಯಗಳು, ಸಂಗೀತ ಕಾರ್ಯಕ್ರಮಗಳು, ಸಾಂಸ್ಕೃತಿಕ ಪ್ರದರ್ಶನಗಳು, ಕ್ರೀಡಾ ಅವಕಾಶಗಳಿಗೆ ಉಚಿತ ವೇದಿಕೆ ಕಲ್ಪಿಸುತ್ತಿದ್ದು ಶುಚಿ ರುಚಿ ಬೆರೆತ ತರಹೇವಾರಿ ಖಾದ್ಯಗಳ ಸವಿಯುವ ಅವಕಾಶವನ್ನು ಕೂಡಾ ಪ್ರೇಕ್ಷಕರಿಗೆ ನೀಡುತ್ತದೆ. ಪ್ರತಿ ವರ್ಷವೂ ನವನವೀನ ಪ್ರಯೋಗಗಳನ್ನು ಗ್ಲೋಬಲಗ ವಿಲೇಜ್ ಪರೀಕ್ಷಿಸುತ್ತಿದ್ದು ಅದರಲ್ಲೂ ವೈವಿಧ್ಯಮಯ ಶಾಪಿಂಗ್ ಉತ್ಸವಗಳು, ಆಟೋಮೊಬೈಲ್ ವಸ್ತುಪ್ರದರ್ಶನಗಳು ಮತ್ತು ಕಲಾತ್ಮಕ ಮಂಡನೆಗಳು ಗಮನ ಸೆಳೆಯುತ್ತದೆ. ಕಳೆದ ಬಾರಿ ಶಾರುಖ್ ಖಾನ್ ರವರ ಭೇಟಿ ಗ್ಲೋಬಲ್ ವಿಲೇಜಿನ ಕಾರ್ಯಕ್ರಮಗಳಿಗೆ ಅದ್ದೂರಿಯಾದ ಶುಭಾರಂಭ ನೀಡಿದದು ಯುಎಇಯವರು ಇನ್ನೂ ಮರೆತಿಲ್ಲ.
ನೋಡುಗರ ಕ್ಯಾಮೆರಾ ಕಣ್ಣುಗಳಿಗೆ ಹಬ್ಬ ನೀಡುವ ದೃಶ್ಯ ವೈಭವ ಇಲ್ಲಿನ ವಿಶೇಷ ಆಕರ್ಷಣೆ. ಇಲ್ಲಿ ಬಂದು ಸ್ಟಾಲ್ ಹಾಕುವ ವಿವಿಧ ದೇಶಗಳ ಸ್ಟಾಲ್ ಗಳನ್ನು ಒಮ್ಮೆ ಸುತ್ತಾಡಿ ಬಂದರೆ ಸಪ್ತ ಸಾಗರಗಳನ್ನು ದಾಟುವ ಉಮೇದು ನಮ್ಮದಾಗುತ್ತದೆ. ಕೈಚಳಕದ ಕಲಾಕುಸುರಿಗಳು, ಪಾರಂಪರಿಕ ಸಮೃಧ್ಧ ಆಹಾರಗಳು, ಘೋಷಯಾತ್ರೆಗಳು ನೋಡಕೊಂಡು ಕಣ್ತುಂಬಿಕೊಳ್ಳಲು ಪ್ರವಾಸಿಗರು ದಟ್ಟನ ಕ್ಯೂಗಳಲ್ಲಿ ನಿಂತು ಕಾಯುತ್ತಾರೆ.
ಇಡೀ ಭೂಮಿಯೇ
ಮೈವೆತ್ತು ಬಂದಂತೆ ಭಾಸವಾಗುವ ಗ್ಲೋಬಲ್ ವಿಲೇಜ್ ನಲ್ಲಿ ದೇವಾಲಯಗಳಿಂದ ಹಿಡಿದು, ಟೈಗರ್ ಪ್ಯಾಂಥರ್ ನಕಲಿ ಗುಹೆಗಳವರೆಗೆ ಅನೇಕ ಚಿತ್ರಪ್ರದರ್ಶನ, ಸಂಸ್ಕೃತಿಯ ಪ್ರತಿಕೃತಿಗಳು
ಪ್ರವಾಸಿಗರ ಮನ ತಣಿಸುತ್ತದೆ. ಸರಿ ಸುಮಾರು 25 ಹೆಕ್ಟೇರ್ ಪ್ರದೇಶದ ವ್ಯಾಪ್ತಿಯಲ್ಲಿ
ಹರಡಿಕೊಂಡಿರುವ ಗ್ಲೋಬಲ್ ವಿಲೇಜ್ ವರ್ಷದ ಎಲ್ಲಾ ದಿನಗಳಲ್ಲೂ ತರೆದಿರಲ್ಲ ಎನ್ನುವುದನ್ನು ನೆನಪಿಸಿಕೊಳ್ಳಬೇಕಿದೆ.
ಪ್ರತಿ ವರ್ಷ ಅಕ್ಟೋಬರ್ ನಲ್ಲಿ ಓಪನ್ ಆಗಿ ಮುಂದಿನ ವರ್ಷದ ಮೇ ವರೆಗೆ ಗ್ಲೋಬಲ್ ವಿಲೇಜ್ ಸರಿಸುಮಾರು
ಮುಂದುವರಿಯುತ್ತದೆ. ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ ವಾರದ ಎಲ್ಲಾ ದಿನವೂ ಗ್ಲೋಬಲ್
ವಿಲೇಜ್ ಓಪನ್ ಇರುತ್ತದೆ. ಮಂಗಳವಾರ ಕುಟುಂಬ, ಜೋಡಿಗಳು ಹಾಗೂ ಮಹಿಳೆಯರಿಗೆ ಮಾತ್ರ ಮೀಸಲಿರಿಸಲಾಗಿದೆ.
ಸಮಯಕ್ರಮ ಇಂತಿದೆ:
ಭಾನುವಾರದಿಂದ ಬುಧವಾರದವರೆಗೆ:
ಸಂಜೆ ನಾಲ್ಕರಿಂದ ಬೆಳಗಿನ ಜಾವ ಒಂದು ಗಂಟೆಯ ವರೆಗೆ
ಗುರುವಾರದಿಂದ ಶುಕ್ರವಾರದವರೆಗೆ:
ಸಂಜೆ ನಾಲ್ಕರಿಂದ ಬೆಳಗಿನ ಜಾವ ಎರಡು ಗಂಟೆಯವರೆಗೆ
ಈ ವರ್ಷ ಮೇ ಹನ್ನೊಂದರವರೆಗೆ ಶೋ ಮುಂದುವರಿಯಲಿದ್ದು ಟಿಕೆಟ್‌ಗಾಗಿ ಗ್ಲೋಬಲ್ ವಿಲೇಜಿನ ಜಾಲತಾಣವಾದ www.globalvillage.ae ಸಂದರ್ಶಿಸಬಹುದು.
Post a Comment